
ನೆನಪುಗಳ ಮಾತು ಮಧುರ !!
ಈ ಮಾತು ಎಷ್ಟು ಚಂದ.
ಎಲ್ಲಾ ಮರೆತಿರುವಾಗ ಬರುವುದು ಇಲ್ಲ ಸಲ್ಲದ ನೆನಪುಗಳು.
ಎಷ್ಟು ಅರ್ಥ ಇದೆ ಈ ಸಾಲಿನಲ್ಲಿ.
ನಾವುಗಳು ಎಷ್ಟು ದೊಡ್ಡವರಾದರು ಆ ಬಾಲ್ಯದ ನೆನಪುಗಳು ಅಲ್ಲದೆ ಬೇರೆ ಏನೇನೊ ನೆನಪುಗಳು ನಮ್ಮ ಮನಸನ್ನು ಹೊಕ್ಕಿ ಬೇರೆ ಯಾವುದೋ ಲೋಕಕ್ಕೆ ಕರೆದೊಯುತ್ತದೆ ಈ ಮಧುರವಾದ ನೆನಪುಗಳು.ಅದರ ಬಗ್ಗೆ ಮಾತನಾಡಿದಾಗ್ಲು ಏನೋ ಸಂತೋಷ ಸಿಗುತ್ತದೆ.
"ನೆನಪು" ಎನ್ನುವುದು ಕಳೆದು ಹೋದ ಸಮಯ ಹಾಗು ಸಂದರ್ಭಗಳನ್ನು ನೆನಪಿಸಿಕೊಡುತ್ತದೆ.ಈ ಕಳೆದು ಹೋದ ಸಮಯ
ಮನಸ್ಸಿನ ಮೇಲೆ ಘಾಡವಾದ್ ಪ್ರಭಾವ ಬೀರಿರುವುದರಿಂದ ಅದು ಮನಸಿನಲ್ಲೆಲ್ಲೋ ಅವಿತು ಕೂತಿರುತ್ತದೆ.ಬೇರೆ ಏನೋ ಯೋಚನೆ ಮಾಡಿದಾಗ ಈ ಇಲ್ಲ ಸಲ್ಲದ ನೆನಪುಗಳು ಮನಸನ್ನು ಕಾಡುತ್ತದೆ ಹಾಗು ದಣಿದ ಮನಸ್ಸಿಗೆ ಉಲ್ಲಾಸವನ್ನು ಕೊಡುತ್ತದೆ.ಇಲ್ಲ ಸಲ್ಲದ ನೆನಪುಗಳಿಗೆ ಯಾಕೆ ಪ್ರಾಮುಖ್ಯತೆ ಕೊಡಬೇಕೆಂದರೆ ಎಲ್ಲ ನೆನಪುಗಳು ಬರಿ ಸಿಹಿಯಾಗಿರುವುದಿಲ್ಲ.ಸಿಹಿ ಕಹಿ ಘಟನೆಗಳ ಸಮ್ಮಿಲನವೇ ಜೀವನ ಅಲ್ಲವೇ!!! ಹಾಗೆಯೇ ನೆನಪುಗಳು ಸಹ.ಸಿಹಿ ಕಹಿ ನೆನಪುಗಳು ಬರುವುದು ಸಹಜ.ಕೆಲವು ಬರಿ ಕಹಿ ನೆನೆಪುಗಳು ಹಾಗೆ ಸುಮ್ಮನೆ ಬಂದಾಗ ಅದನ್ನ ನಾವು "ಎಲ್ಲ ಮರೆತಿರುವಾಗ ಬರುವುದು ಇಲ್ಲ ಸಲ್ಲದ ನೆನಪುಗಳು" ಅಂತ ಅಂದುಕೊಳ್ತ್ಹಿವಿ.
ಎಲ್ಲಾ ಮನುಜರಿಗೂ ಎಷ್ಟೊಂದು ಏನೇನೊ ನೆಪಪುಗಳು!!!!ಲೆಕ್ಕಿಸುವುದಕ್ಕೆ ಆಗೋಲ್ಲ..
ಆದರೆ ಏನೇ ಅಂದ್ರು ಬಾಲ್ಯದ ನೆನಪುಗಳು ನೆನೆಪೇ . ಆ ದಿನಗಳ ಆಟ,ಸ್ನೇಹಿತರು,ಮಾತುಗಳು
ರಜ ಬಂದಾಗ್ ಅಜ್ಜಿ ಮನೆಗೆ ಹೋಗಿ ಎಲ್ಲಾ ಅಣ್ಣ,ತಮ್ಮ,ಅಕ್ಕ,ತಂಗಿಯರ ಜೊತೆಗೂಡಿ ಆಟ, ಅಜ್ಜಿಯ ಕೈತುತ್ತು, ಅಜ್ಜಿ ಹೇಳುವ ಕಥೆಗಳು ಎಲ್ಲಾ ಇನ್ನು ಇವಾಗಲೇ ಎಲ್ಲೊ ಕೇಳಿಕೊಂಡು ಬಂದಹಂಗೆ ಇದೆ.
ಅಹ!!ಏನು ಚಂದಾ ಆ ಶಾಲೆ,ಆ ಸ್ನೇಹಿತರು,ಆ ಭೋಧಕರುಗಳು,ಆ ಬಾಲ್ಯ ಗೀತೆಗಳು,ಆ ಚಂದಮಾಮ ಪುಸ್ತಕ . ಆಟದಲ್ಲೇ ಪಾಠ ಅಂತ ಆಟವನ್ನು ಆಡಿಸಿ ಜೊತೆಗೆ "ಅ ಆ ಇ ಈ ಹಾಗು ಮಗ್ಗಿಗಳನ್ನು" ಕಲಿಸುತಿದ್ದರು.
ಆ ಮಣ್ಣಿನಲ್ಲಿ ಆಟ,ಬೊಂಬೆ ಆಟ....ದೇವರೇ.. !! ಈ ನೆನಪುಗಳಿಗೆ ಕೊನೆಯೇ ಇಲ್ಲವೇ??
ಆ ಹಾಡು,ನೀತಿ ಪಾಠ ಕಲಿತ ದಿನಗಳು,ತಾತನ ಜೊತೆ ಹೊರಗೆ ಹೋಗುವ ಹಠ.
ಈ ಎಲ್ಲಾ ನೆನಪುಗಳನ್ನು ಅಗಾಗ ಜ್ಞಾಪಿಸಿಕೊಂಡು ಇವಾಗ ದೊಡ್ದವರಾಗಿದ್ದಿವಿ.
ಈ ನೆನೆಪು ಎನ್ನುವುದು ಏನೋ ಒಂದು ತರಹ ಮನಸ್ಸಿಗೆ ಸಿಹಿ ತಂದುಕೊಡುತ್ತದೆ.
ಹಿಂದಿನ ಬಾಲ್ಯಕ್ಕೆ ಹೋಗಲಾರದೆ ಮುಂದಿನ ಹೆಜ್ಜೆಯಾಯದ ಪ್ರಪಂಚಕ್ಕೆ ಒಬ್ಬೊಂಟಿಯಾಗಿ ಕಾಲಿಡುವ ನಮ್ಮೆಲರಿಗೂ ಈ ನೆನಪು ಮನಸ್ಸಿಗೆ ಸಿಹಿಯನ್ನು ಕೊಡುವುದಲ್ಲದೆ ಆಗ ಕಲಿತಿದ್ದ ನೀತಿ ಪಾಠಗಳನ್ನು ಪಾಲಿಸುವ ಸಮಯವೂ ಬಂದಿದೆ.
ಪ್ಸ್:ಇದು ನಾನು ಕನ್ನಡ ದಲ್ಲಿ ಬರೆದಿರುವ ಮೊದಲನೆ ಬ್ಲಾಗ್.ಎಲ್ಲಾದರು ಅಕ್ಷರ ತಪ್ಪು ಕಂಡು ಬಂದಲ್ಲಿ ಓದುವಾಗ ದಯವಿಟ್ಟು ಕಾಮೆಂಟ್ ಮಾಡಿ.